ಹೆಣ್ಣು ಹಾದರ ಮಾಡ್ತಾಳೆ ಅಂತ ಕಾಲದಿಂದಲು ಹೇಳಿಕೊಂಡು ಬಂದ ಮಾತಿಗೆ.. ಗಂಡಸು ಹೊರತನಲ್ಲ ಅನ್ನೊದನ್ನೂ ಈ ವೆಬ್ ಸಿರೀಜ್ ನಲ್ಲಿ ಹೇಳಲಾಗಿದೆ.
“ಇಲ್ಲಿ ಯಾರೋ ಒಳ್ಳೇಯವರಿಲ್ಲ.. ಕೆಟ್ಟದ್ದನ್ನ ಮಾಡೋಕೆ ಅವಕಾಶ ಸಿಗ್ತಿಲ್ಲ ಅಷ್ಟೇ.. ಸಿಕ್ಕವರ್ಯಾರೂ ಬಿಟ್ಟೂ ಇಲ್ಲ.” ಸಂಬಂಧಗಳಿಗೆ, ಕ್ರಿಯೆಗಳಿಗೆ, ಅಂಟುಕೊಳ್ಳುತನಕ್ಕೆ ಕೊಡೊ ಹೆಸರುಗಳಷ್ಟೆ ಬೇರೆ ಬೇರೆ ಐ ಮೀನ್ ಸಮಝಾಯಿಸಿಗಳು…
ಚಲ್ತಾ ಹೇ ಯಾರ್.. ಅನ್ನೊ ಮನಸ್ಥಿತಿ.
ಇರ್ಲಿ..
Highly Not Recomended for Family and Kids (Unless ಓಪನ್ ಮೈಂಡೆಡ್ ವಿಚಾರಗಳಿಗೆ ಜಾಗ ಇಲ್ದೆ ಇದ್ದಾಗ) & Mind the volume level during first half. – ಮುಜುಗರಕ್ಕೀಡಾಗಿ ಬಿಡ್ತಿರಿ ![]()
ಮೋದಿಜಿ ಅವ್ರು ಆತ್ಮ ನಿರ್ಭರ ಭಾರತ ಅಂತ ಯಾವತ್ತು ಹೇಳಿದ್ರೊ ಈ ಚಿತ್ರದ ನಾಯಕ ತನ್ನ ಹೆಂಡತಿ ಯಾವತ್ತೊ ಹೇಳಿದ ತನ್ನ ಬೆಡ್ ಟೈಮಿಂಗ್ ಚನ್ನಾಗಿದೆ ಅಂತ ಅದನ್ನೆ ಕಸುಬು ಮಾಡಿಕೊಳ್ಳೊದಾ.. (Male Prostitute ಅಥವಾ Call boy)
ಸಮಾಜವೇ ಭೋಗಮಯವಾಗಿರುವ ಯಾರ್ಯಾರಿಗೆ ಯಾವುದ್ಯಾವುದರ ಬಯಕೆ ಇರತ್ತೊ ಅನ್ನೊದು ಒಂದು ಕಡೆಯಾದರೆ ಅದನ್ನ ಪೂರೈಸೊ ಎಲ್ಲ ಬಗೆಯ ವ್ಯವಸ್ತೆ ಆದಾಗಲೆ ಮಾರ್ಕೆಟ್ ನಲ್ಲಿದೆ ಅನ್ನೊದು ನಿಜಾ.
ಇಂಥಹ ಒಂದು ಕಥೆಯನ್ನ ಇಟ್ಟುಕೊಂಡು ಮಾಡಿದ ವೆಬ್ ಸಿರೀಜ಼್ ಇದು. ಮೊದಲ ಅರ್ಧ ಅಂತೂ ಪಕ್ಕಾ ಹಸಿಬಿಸಿ ಸೀನ್ ಗಳು ಅದರೊಟ್ಟಿಗೆ ಅದರೊಂದಿಗೆ ಬರುವ ಸೌಂಡ್ ಇಫೆಕ್ಟ್ ಗಳು.. ಆಹಾ! ಕರ್ಣಾನಂದ.. (ಹುಷಾರು ಫ್ಯಾಮಿಲಿ ಜೊತೆ ನೋಡಬೇಕಾದ್ರೆ)
ಈ ಸಿರೀಜ಼್ ನ ಬೇಜಾರಿನ ಸಂಗತಿ ಎಂದರೆ ‘ಮಾನವ್ ಕೌಲ್’ ರ ರನ್ನು ಮುಖ್ಯ ಪಾತ್ರದಲ್ಲಿ ಆರಿಸಿಕೊಂಡಿದ್ದು.. ಅವರನ್ನು ಕಥೆ, ಕವನ, ಸಾಹಿತ್ಯ, ಸೌಮ್ಯತೆ ಈ ಲೆವೆಲ್ಲಿನಲ್ಲಿ ನೋಡಿದ ನಮಗೆ ಈ ಸಿನೇಮಾದಲ್ಲಿ ಅವರು ಬೇಡಾಗಿತ್ತು ಅಂತ ಅನಸ್ತು.
ಇನ್ನುಳಿದಂತೆ ವೆಬ್ ಸಿರೀಜ಼್ ನಲ್ಲಿ ಎಲ್ಲ ಅದ್ಭುತ ನಟರನ್ನ ಹಾಕಿಕೊಂಡು ಕಳಪೆ ಮತ್ತು ಆಧಾರರಹಿತ ಕಥಾಹಂದರದಲ್ಲಿ ನಟಿಸಿಕೊಂಡಿದ್ದು They deserve more.
CA ಗೂ ಇದ್ದಕ್ಕು ಯಾವೂದೇ ರೀತಿಯ ಸಂಬಂಧವಿಲ್ಲ. ಅದಾಗಲೇ CA ದವ್ರು ಕೇಸ್ ಹಾಕಿಯಾಗಿದೆ ಅವರ ಹೆಸರನ್ನು ಬಳಸಿಕೊಂಡಿದಕ್ಕೆ.. ![]()
ಈ ಸಿರಿಜಿಗೆ ರೆಂಟಿಂಗ್ ನಾನು ಕೊಡೊಲ್ಲ.. ನೋಡಿ ಅಥವಾ ನೋಡ್ಬೇಡಿ ಅಂತಾನೂ ಹೆಳೋದಿಲ್ಲ..ನಿಮ್ಮಿಷ್ಟಕ್ಕೆ ಬಿಟ್ಟಿದ್ದು.


