1996 ರಲ್ಲಿ ತೆರೆಕಂಡ “Twister” ಸಿನೇಮಾದ್ದ ದೊಡ್ಡ ವರ್ಷನ್ನು ಅನ್ನಬಹುದು. ಆಧುನಿಕ ತಂತ್ರಜ್ಞಾನ ಮತ್ತು ಹೊಸ ಕಥೆಯೊಂದರ ಮೂಲಕ ಮತ್ತೊಮ್ಮೆ ಆ ಫೀಲ್ ಕೊಡೊದ್ರಲ್ಲಿ ಎರಡನೇ ಮಾತಿಲ್ಲ.
ತಂತ್ರಜ್ಞಾನ ಮತ್ತು ಸ್ಪೆಷಲ್ ಎಫೆಕ್ಟ್ಸ್ ಬಳಕೆಯೊಂದಿಗೆ ಚಂಡಮಾರುತಗಳ ದೃಶ್ಯಗಳು ಆಕರ್ಷಕವಾಗಿ ಮೂಡಿ ಬಂದಿದ್ದು ಪ್ರೇಕ್ಷಕರು ತಾವೇ ಸಿಲುಕಿಕೊಂಡಿರುವ ಫೀಲ್ ಮಾಡ್ಸತ್ತೆ.
ಈ ಚಿತ್ರದ ಮುಖ್ಯ ಪಾತ್ರಧಾರಿ Daisy Edgar-Jones ರ ಕೇಟ್ ಪಾತ್ರ ಹಾಗೂ Glen Powell ರ Tyler ಪಾತ್ರವು ತಮ್ಮ ನಿಖರ ಅಭಿನಯದ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದ್ದಾರೆ. ಅವರ ತಂಡವು ತೀವ್ರಗೊಳ್ಳುತ್ತಿರುವ ಚಂಡಮಾರುತಗಳ ಅಧ್ಯಯನದಲ್ಲಿ ನಿರತರಾಗಿದ್ದು, ತಮ್ಮ ವೈಜ್ಞಾನಿಕ ಸಂಶೋಧನೆಯ ಮೂಲಕ ಪರಿಸರದ ದ್ವಂಸವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಾರೆ. ಈ ಸಂಧರ್ಭದಲ್ಲಿ, ವೈಜ್ಞಾನಿಕ ಅಧ್ಯಯನದ ಜೊತೆಗೆ, ವ್ಯಕ್ತಿಗತ ಹೋರಾಟಗಳು ಮತ್ತು ಸ್ನೇಹಿತರ ದುರ್ಮರಣ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ.
ಚಲನಚಿತ್ರವು ಮುಖ್ಯವಾಗಿ ವೈಜ್ಞಾನಿಕ ಸಂಶೋಧನೆ, ಮನುಷ್ಯ ಪ್ರೀತಿ ಮತ್ತು ಒಗ್ಗಟ್ಟಿನ ಮಹತ್ವವನ್ನು ಪ್ರಸ್ತುತಪಡಿಸುತ್ತದೆ.
ನೋಡಬಹುದು.


