Best Marvel movie after Endgame!! A Hilarious, Action-Packed, and Heartfelt Adventure!
ಎವೆಂಜರ್ಸ್ ಎಂಡ್ ಗೇಮ್ ಬಂದ್ಮೇಲೆ, ಐರನ್ ಮ್ಯಾನ್ ತೀರಿಕೊಂಡ ಮೇಲೆ, ಕ್ಯಾಪ್ಟನ್ ನ ರಿಟೈರ್ ಮೆಂಟ್ ಆದ್ಮೇಲೆ ಮಾರ್ವಲ್ ನಲ್ಲಿ ನೋಡೊದಕ್ಕೆ ಏನೂ ಉಳಿಯೋದಿಲ್ವೆನು ಅಂತ ದುಃಖ ತಪ್ತರಾದ ಅನೇಕ ಜನರಲ್ಲಿ ನಾನೂ ಒಬ್ಬ. ಅದೆಷ್ಟೋ ದಿನ ಖಾಲಿ ತನ ಕೂಡಾ ಅನುಭವಿಸಿದ್ದಿನಿ.
ಆಮೇಲೆ ಬಂದು ಮಾರ್ವಲ್ ಸಿನೇಮಾಗಳಲ್ಲಿ ಸತ್ವ ಇಲ್ಲಿ ಅಂತಾ ಮಾರ್ವಲ್ ಫ್ಯಾನ್ ಆರ್ಮಿಯಿಂದ ನಿವೃತ್ತಿ ಇನ್ನೇನು ಪಡೆಯಬೇಕು ಅಂದುಕೊಳ್ಳುತ್ತಿರಿವಾಗ ತೆರೆಕಂಡ ಸಿನೇಮಾನೆ ಇದು. ಈಗ ಮತ್ತೆ ಮೊದಲಿನ ಥರಾ ನೂರು ಆನೇ ಬಲ ಬಂತಂತಾಗಿದೆ “ಡೆಡ್‌ಪೂಲ್ & ವೊವ್ವರಿನ” ರ ಜೋಡಿಯನ್ನು ನೋಡಿ.
ಮಾರ್ವಲ್ ನ ಯಾವುದಾದ್ರೂ ಸಿನೇಮಾವನ್ನ ಈ ಮುಂಚೆ ನೋಡಿದ್ರೆ ಈ ಚಿತ್ರವನ್ನು ನೀವು ಯಾವ ಕಾರಣಕ್ಕೂ ತಪ್ಪಿಸಲು ಸಾಧ್ಯವಿಲ್ಲ! ಚಿತ್ರವು ಎರಡು ಅಪ್ರಮೇಯ ಮಾರ್ವೆಲ್ ಹೀರೋಗಳನ್ನು ಜೊತೆಗೂಡಿಸಿಕೊಂಡು ಅಭಿಮಾನಿಗಳಿಗೆ/ಪ್ರೇಕ್ಷಕರಿಗೆ ಅತೀ ಹಾಸ್ಯ ಮತ್ತು ಭಯಂಕರ ಆಕ್ಷನ್ ತುಂಬಿದ ಅಸಾಧಾರಣ ಅನುಭವವನ್ನು ನೀಡುವ ಸಿನೇಮಾ.
ಅನೇಕ ಟೈಮ್ ಟ್ರಾವೆಲ್ ನಲ್ಲಿ ಸಿನೇಮಾದ ಕಥೆ ಅಡಗಿರುವುದರಿಂದ ಸಿನೇಮಾದಲ್ಲಿ ಬರುವ ಗೆಸ್ಟ್ ಅಪೇರಿಯನ್ಸ್ ನ ಹಿರೋಗಳು ಪಕ್ಕಾ ವ್ಹಿಸಲ್ ಪೋಡು ಸನ್ನಿವೇಶಗಳನ್ನು ಸಿನೇಮಾದ ಉದ್ದಕ್ಕೂ ತಂದು ಕೊಡುತ್ತದೆ.
ವೂಲ್ವರಿನ್ ಮತ್ತು ಡೆಡ್‌ಪೂಲ್ ಇಬ್ಬರ ನಡುವಿನ ಕೆಮಿಸ್ಟ್ರಿ ಸಿಕ್ಕಾಪಟ್ಟೆ ಮನರಂಜನೆ ನೀಡತ್ತೆ. ಚಿತ್ರದ ಪ್ರಮುಖ ಅಂಶಗಳಲ್ಲಿ ಒಂದಾಗಿರುವ ಡೆಡ್‌ಪೂಲ್ ನ ಹಾಸ್ಯ ಹಾಗೂ ಡೈಲಾಗ್ ಗಳು ಸಿಕ್ಕಾ ಪಟ್ಟೆ ಚಂದವಾಗಿದ್ದು ಎಲ್ಲೆಲ್ಲೂ ಬೋರ್ ಹೊಡಿಸೊದಿಲ್ಲ..
ಮಾರ್ವಲ್ ನ ಸಿನೇಮಾವನ್ನ ಮರೆತವರು ನೋಡಲೇಬೇಕಾದ ಸಿನೇಮಾ.


