ಸಾಮಾನ್ಯವಾಗಿ ದೊಡ್ಡ ದೊಡ್ಡ ತಾರೆಗಳ, ಬ್ಯಾನರ್ ಗಳ ಸಿನೇಮಾಗಳನ್ನು ವಿಕ್ಷೀಸುವ ಭರದಲ್ಲಿ ಅಷ್ಟು ಪ್ರಚಾರ ಪಡೆಯದ ಸಣ್ಣ ಚಿತ್ರಗಳನ್ನು ನಾವು ಮರೆ ಮಾಚಿಬಿಟ್ಟು ಒಂದು ಉತ್ತಮವಾದ ಕಂಟೆಂಟ್ ಅನ್ನ ಮಿಸ್ ಮಾಡುಕೊಂಡು ಬಿಟ್ಟರುತ್ತೇವೆ.
ಆದರೆ ಇಂಥಹ ಸಿನೇಮಾಗಳು ತಮ್ಮ ಸರಳತೆ ಮತ್ತು ಮುದಭರಿತವಾದ ಕಥೆಯಿಂದ
ನಮ್ಮ ಮೇಲೆ ಚಿಕ್ಕ ರೀತಿಯ ಪರಣಾಮ ಬೀರಲು ಯಶಸ್ವಿಯಾಗುತ್ತವೆ.
ಅದೇ ಸಾಲಿನಲ್ಲಿ ಬಂದು ನಿಲ್ಲುವ ಚಿಕ್ಕದಾದ ಮತ್ತು ಅಷ್ಟೇ ಹಿತವಾದ ಚಿತ್ರರ ‘ಟಿಕದಮ್’. ಈ ಅಮೀತ್ ಸೇಲ್ ರನ್ನು ಬರೀ ಗುಂಡಾ ಪಾತ್ರ, ಪೋಲಿಸ್ ಪಾತ್ರಗಳಲ್ಲಿ ನೋಡಿದ ನಮ್ಮಂಥವರಿಗೆ ಈ ರೀತಿಯ ಮುಗ್ಧತೆಯನ್ನ ಈ ಮನುಷ್ಯ ಇಷ್ಟು ಚನ್ನಾಗಿ ನಿಭಾಯಿಸಬಲ್ಲರು ಅಂತ ಗೊತ್ತಾಗಿದ್ದೆ ಈ ಸಿನೇಮಾದಲ್ಲಿ.
ಉತ್ತರಾಖಂಡ್ ನ ಬೆಟ್ಟ ಗುಡ್ಡಗಳ ಪ್ರದೇಶದ ಹಿನ್ನೆಲೆಯಲ್ಲಿ ಈಡಿ ಸಿನೇಮಾವನ್ನ ಚಿತ್ರಿಸಿದ್ದು ಪ್ರಕೃತಿ, ವಾತಾವರಣ, ಊರಿನ ಮುಗ್ಧತೆ ಎಲ್ಲವೂ ಹಿತಕರವಾದ ಭಾವವನ್ನನ ತಂದು ಕೊಡುತ್ತದೆ. ಟೂರಿಸಮ್ ನ್ನೆ ನಂಬಿಕೊಂಡು ವ್ಯಾವಹಾರಿಕವಾಗಿ ಜೀವನ ನಡೆಸುವವರು ಆಫ್ ಸೀಸನ್ನಿನಲ್ಲಿ ತಮ್ಮ ಜೀವನವನ್ನ ಯಾವ ರೀತಿಯಿಂದ ಬದುಕುತ್ತಾರೆ ಅನ್ನೊ ವಿಷಯವನ್ನು ಇಟ್ಟುಕೊಂಡು ಚಿತ್ರವನ್ನ ನಿರ್ದೇಶಿಸಿದ್ದಾರೆ.
ಚಿತ್ರದಲ್ಲಿ ಬಡತನ, ಬಾಂಧವ್ಯ, ಹವಾಮಾನ ಬದಲಾವಣೆ ಮತ್ತು ಮಕ್ಕಳ ಹೋರಾಟ ಈ ತರಹದ ವಿಷಯಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನ ಕೊಡಲಾಗಿದೆ ಇದರ ಜೊತೆಗೆ ಚಿತ್ರದ ಹಾಡುಗಳು ಸಿಕ್ಕಾ ಪಟ್ಟೆ ಚನ್ನಾಗಿವೆ.
ಎರಡು ಗಂಟೆಗಳ ಸಿನೇಮಾದಲ್ಲಿ ಎಲ್ಲೂ ಬೋರ್ ಹೊಡೆಯದ ಹಾಗೆ ಸಿನೇಮಾವನ್ನ ಮಾಡಿದ್ದಾರೆ. ಒಂದು ಮೆಡಿಟೇಟಿವ್ ಥರವಾದ ಅನುಭವ.
ಸಾಧ್ಯವಾದರೆ ನೋಡಿ ಒಮ್ಮೆ.


