ಬಕಿಂಗ್ಹ್ಯಾಮ್ ಮರ್ಡರ್ಸ್ ಈ ದಿನಗಳಲ್ಲಿ ನೋಡಿದ ಚಂದದ ಥ್ರಿಲ್ಲರ್ ಸಿನೇಮಾ ಆಗಿದ್ದು ಸಮಾಜದ ಅನೇಕ ಬಗೆಯ ಸಂಕುಚಿತ ಮನೋಭಾವಗಳನ್ನು ವ್ಯಕ್ತಪಡಿಸುವ ಕಥೆಯಾಗಿದೆ.
ಜನಾಂಗೀಯ ಆರೋಪದ ಮೇಲೆ ನಡೆಯುತ್ತಿರುವ ಕೊಲೆಗಳ ಸರಣಿಯ ಮೇಲೆ ಕಥೆ ಅವಲಂಬಿತವಾಗಿದ್ದು ಯಾರು ಕೊಲೆ ಮಾಡಿದರು ಅನ್ನೊ ಸಸ್ಪೆನ್ಸ್ ಅನ್ನ ಕೊನೆಯವರೆಗೆ ಕಾಪಾಡಿಕೊಂಡು ಬಂದಂಥ ಸಿನೇಮಾ.
ಕರೀನಾ ಕಪೂರ್ ಳ ಗಂಭೀರವಾದ ನಟನೆ ಪ್ರೇಕ್ಷರಿಗೆ ಇಷ್ಟವಾಗಬಹುದು. ಸಿನೇಮಾದ ಹಾಡುಗಳು ಚಂದದ ರೀತಿಯಲ್ಲಿ ಮೂಡಿ ಬಂದಿವೆ.
ಒಟ್ಟಾರೆಯಾಗಿ ಬಕಿಂಗ್ಹ್ಯಾಮ್ ಮರ್ಡರ್ಸ್ ಚೆನ್ನಾಗಿ ರಚಿಸಲಾದ ಥ್ರಿಲ್ಲರ್ ಆಗಿದ್ದು ನಿಮಗೆ ಇಷ್ಟವಾಗಬಹುದು.


