Manvat Murders

1970ರ ದಶಕದ ಆರಂಭದಲ್ಲಿ, ಮಹಾರಾಷ್ಟ್ರದ ಮನ್ವತ್ ಎಂಬ ಹಳ್ಳಿಯಲ್ಲಿ ಕೆಲ ಭಯಾನಕ ಸರಣಿ ಕೊಲೆಗಳು ಸಂಭವಿಸಿ ದೇಶವನ್ನ ತಲ್ಲಣಗೊಳಿಸಿದ್ವು, ಈ ಘಟನೆ ಭಾರತದ ಇತಿಹಾಸದ ಅತ್ಯಂತ ಕುಖ್ಯಾತ ಅಪರಾಧ ಪ್ರಕರಣಗಳಲ್ಲಿ ಒಂದಾಗಿತ್ತು. 1972 ರಿಂದ 1974ರ ನಡುವೆ ನಡೆದ ಈ ಕೊಲೆಗಳಲ್ಲಿ ಏಳು ಮಹಿಳೆಯರು ಮತ್ತು ಯುವತಿಯರು ಬಲಿಯಾಗಿದ್ದರು, ಅವರ ರಕ್ತವನ್ನು ಅಶುಭ ಬಲಿ ಪ್ರಕ್ರಿಯೆಗಳಲ್ಲಿ ಸಮರ್ಪಿಸಲಾಗಿತ್ತು. ಇದು ಮೂಢನಂಬಿಕೆ ಮತ್ತು ಲಾಭಾಸಕ್ತಿಯಿಂದ ಪ್ರೇರಿತವಾದ ಖಜಾನೆಯ ಹುಡುಕಾಟದ ಭಾಗವಾಗಿತ್ತು. ಈ ಅಪರಾಧಿಗಳು ಮಾನವ ಬಲಿಯನ್ನು ನೆರವೇರಿಸಿ 16ನೇ ಶತಮಾನದ ಖಜಾನೆಯನ್ನು ಪತ್ತೆಹಚ್ಚಬಹುದು ಎಂಬುದನ್ನು ನಂಬಿದ್ದರು.

CID ಅಧಿಕಾರಿಯಾದ ರಾಮಕಾಂತ್ ಕುಲಕರ್ಣಿಯವರ ನೇತೃತ್ವದಲ್ಲಿ ನಡೆದ ತನಿಖೆ ಈ ಕೊಲೆಗಳ ಹಾಗೂ ಹಳ್ಳಿಯಲ್ಲಿನ ಮಾಟ-ಮಂತ್ರಗಳ ಮೂಢನಂಬಿಕೆಗಳ ನಡುವೆ ಭಯಾನಕ ಸಂಪರ್ಕವಿದೆ ಎಂಬುದನ್ನು ಹೊರಹಾಕಿತ್ತು. ನಂತರ ಇದೇ ವಿಷಯದ ಮೇಲೆ ರಾಮಾಕಾಂತ್ ಕುಲಕರ್ಣಿ ಅವರು Footprints on the Sands of Crime (2004) ಎಂಬ ಪುಸ್ತಕವನ್ನ ಕೂಡ ಬರೆದಿದ್ದರು ಈಗ ಅದೆ ಕಥೆ Manvat Murders ಸಿರೀಸ್ ಆಗಿ ತೆರೆಕಂಡಿದೆ.

ಎಂಟು ಎಪಿಸೋಡುಗಳ ಈ ಸರಣಿಯಲ್ಲಿ ಆವತ್ತು ನಡೆದ ಘಟನೆ ಏನು ಮತ್ತು ಮೂಢನಂಬಿಕೆಗಳಿಗೆ ಹೇಗೆ ಜನ ಬಲಿಯಾಗುತ್ತಾರೆ ಅನ್ನೊದನ್ನ ಚಂದದ ರೀತಿಯಲ್ಲಿ ವಿವರಿಸಿದ್ದಾರೆ. ಸ್ವಲ್ಪ ಸ್ಲೋ ಅಂತ ಅನಿಸಿದ್ರೂ ಕೊನೆಯವರೆಗೆ ಮರ್ಡರ್ ಮಿಸ್ಟ್ರಿಯನ್ನ ಕಾಪಾಡಿಕೊಂಡು ಬಂದಂಥ ಸರಣಿ.

ಅಶುತೋಷ್ ಗೋವಾರಿಕರ್ ಅವರು ಶಾಂತ ಪೊಲೀಸ್ ತನಿಖಾಧಿಕಾರಿಯಾಗಿ ನಟಿಸಿದ್ದು ಪ್ರೇಕ್ಷಕರಿಗೆ ಹಿಡಿಸಿದೆ. ಮಾನ್ವತ್ ಮರ್ಡರ್ಸ್ ಉತ್ತಮ ರೀತಿಯಲ್ಲಿ ರೂಪುಗೊಂಡ, ಭಾವನಾತ್ಮಕ ಥ್ರಿಲ್ಲರ್, ಮತ್ತು ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತವಾದ ಕಲೆಯನ್ನು ಬಿಟ್ಟಿಡುತ್ತದೆ.

Leave a Comment

Your email address will not be published. Required fields are marked *

Scroll to Top