ಬಿಟ್ಟು ಹೋದ ಪ್ರೇಯಸಿಯಂತೆ ಭಾಸವಾದ ಊರು

ಈ ಹಾಳಾದ Busy life ನಿಂದ ಸಾಕಾಗಿ ಹೋಗಿ ಕೋನೆಗೆ ನಿರ್ಧಾರ ಮಾಡಿಯೇ ಬಿಟ್ಟೆ ಒಂದೆರಡು ದಿನ ಊರಿಗೆ ಹೋಗಿ ಬರೋಣ ಅಂತ ಬರೋಬ್ಬರಿ ಎಂಟು ತಿಂಗಳ ನಂತರ ನನ್ನೂರ ದಾರಿಯಲ್ಲಿ ನಿರಾಳವಾಗಿ ಮೈಮರೆತ ಕಳೆದ ಎರಡು ದಿನಗಳ ನೆನಪುಗಳು ನಿಮ್ಮ ಮಡಿಲಿಗೆ ಅರ್ಪಿಸುತ್ತಿದ್ದೆನೆ.

ಊರು, ಉಳಿದಂತೆಲ್ಲ ಹಾಗೇ ಇತ್ತು. ಹಳೆಯ ಮನೆಗಳು ಮಾಯವಾಗಿ ಕಾಂಪ್ಲೆಕ್ಸುಗಳಾಗಿ ಎದ್ದು ನಿಂತಿವೆ,ಊರಿನ ಸಂದಿಗೊಂದಿಗಳು ಸಿಮೇಂಟಿನ ಟೈಲ್ಸ ಕಂಡಿವೆ,ಊರಿನ ರೋಡಿನುದ್ದಕ್ಕೂ ಬೇರೆ ಬೇರೆ ತರಹದ ಅಂಗಡಿಗಳು ಆಗಿ ಈಡಿ ಊರಿನ ನಕ್ಷೆಯನ್ನೇ ಬದಲಿಸಿಬಿಟ್ಟಿವೆ ..ನಮ್ಮೂರಿನ Traffic ಕ್ಕೂ ಯಾವ ಮಹಾನಗರಕ್ಕಿಂತಲೂ ಕಮ್ಮಿ ಇಲ್ಲ ಅಂತ ಗೊತ್ತಾದದ್ದು ಅಂಬೇಡ್ಕರ ಸರ್ಕಲ್ ನಿಂದ ಪೇಟೆಗೆ ಕಡೆ ಹೋರಡುವಾಗ . . ಅದೂ ರವಿವಾರದ ಸಂತೆಯಲಿ . . ಅದೇ ಎಂದು ಬೀಗ ಕಾಣದ ಮನೆಗಳು,ಅದೇ ಕಾಯಿಪಲ್ಲೇಗಾಗಿ ಕಿತ್ತಾಡೋ ಪೇಟೆಯ ಸಂತೆಗಾರರು , ಇನ್ನೂ ತನ್ನ ಸ್ವರೂಪವನ್ನು ಬದಲಾಯಿಸಲು ಒಲ್ಲೇ ಎನ್ನುವ ನವಯುಗ ಟಾಕೀಜು . ಈ ತರಹದ ನೂರಾರು ನೋಟಗಳು ಕಣ್ಣಿಗೆ ಎದುರಾಗುತ್ತಿದ್ದವು.

ನನ್ನನ್ನೂ ಮಾತಾಡಿಸದೇ ಕಣ್ಣೆತ್ತಿಯೂ ನೋಡದ ಆ ಕಚೇರಿಗಳು,ಅದೇ ಶಾಲೇಯ ಭಾರಿ ಬ್ಯಾಗನ್ನು ಕೊರಳಿಗೆ ಹಾಕಿಕೊಂಡ ಹುಡುಗರು, ಅದೇ ಹವಾಯಿ ಚಪ್ಪಲಿಗಳ ಮೇಲೆ ಬಣ್ಣ ಬಳೆಯುತ್ತಿರುವ ಬಣಗಾರ ಓಣಿಯ ಆ ಅಮಾನುಷ ವ್ಯಕ್ತಿ.ಬಣ್ಣ ಮಾಸಿದ ಶರ್ಟನ್ನು ಉಜ್ಜಿ ಉಜ್ಜಿ ನೀಟುಮಾಡುತ್ತಿದ್ದ ಅದೇ ಆ ಗಜಾನನ ಮೇಡಿಕಲ್ ನ ಯುವಕ,ಇಸ್ತ್ರಿ ಇಲ್ಲದ ರವಕೆಯನ್ನು ಅಸಡ್ಡೆಯಿಂದ ನೊಡುವ ನೂರಾರು ಕ್ರೂರ ಕಣ್ಣೂಗಳು ರಸ್ತೇಯತುಂಬ.

ಸಂಜೆ ಹೊತ್ತು ಮೋಡದ ಒಂದು ಹಿಂಡು ಬಿಸಿಲಿನ ಛಾಯೆಯನ್ನು ಬಿಡುವಾದ ಕಂಡದ್ದು ನನ್ನೂರಿನ ಇನ್ನೊಂದು ಮುಖ . . ಅದೋ ಆ ಜೇರೆ ಗಲ್ಲಿಯ ಕಟ್ಟಿಯ ಮೇಲೆ ಕೂತ ಬಾಗು ಬೆನ್ನಿನ  ಮುದುಕ.ಅದೋ ಆ ಸೀರೀಪೇಟೆಯ ತಿರುವಿನಲ್ಲಿ ಉಚ್ಚೇ ಹೋಯ್ಯುವ ಯುವಕನ ತವಕ,ಅದೋ ಆ ಬಸವೇಶ್ವರ ಚೌಕದ ಬಳಿ ಭಕ್ತಿಯ ಪರಾಚೆಷ್ಟೆಗೆ ಕೈಮುಗಿವ ಆ ತರುಣಿಯರು ,ಆ ಸಿದ್ದೇಶ್ವರ ಅಗಷಿಯ ಗೂಡಲ್ಲಿ ಬೀರು ಬಿಟ್ಟಿರುವ ಆ ಗುಬ್ಬಿ ಗೂಡು, ನನ್ನ ದೂರದ ಸಂಭಂಧಿಕರ ಮನೆಯ ದಾರಿ .ಅದೋ ಆ ಧೀರ ಗಂಭೀರ ಕರ್ನಾಟಕ ರೆಷ್ಟೊರೆಂಟ್ . ಇವೆಲ್ಲಾ ಆ ಸಂಜೆ ಬಿಸಿಲಿನ ಮಾಯೆಗೆ ತನ್ನ ಚಮತ್ಕಾರವನ್ನು ತೋರಿಸುತ್ತಿದ್ದವು.

ಇವೆಲ್ಲದರ ನಡುವೆ ಎದುರಿಗೆ ಕಾಣ ಸಿಗುವ ಚೇಹೆರೆಗಳು ಒಂದಿಷ್ಟು ಗುರುತಿಗೆ ಬಿಳುವ ಇನ್ನೊಂದಿಷ್ಟು ಪರಿಚಯಕ್ಕೆ ಬಂದು ಕೋನೆಯ ಘಳಿಗೆಯಲ್ಲಿ ಸೋತು ಮುನ್ನಡೆಯುವ ಚೇಹೆರೆಗಳು. ಸಿಕ್ಕ ಹಿರಿಯರ ಕಾಳಜಿಯ ಮಾತುಗಳು,ಸಿಗದ ಮುಖಗಳಿಗೆ ಎಲ್ಲೋ ನೋಡಿದ ಪರಿಚಯದ ಕಾಡು . .ಹೀಗೆ ಹತ್ತು ಹಲವು ವಿನೂತನ ಭಾವ ಅಡಗಿದ ನನ್ನೂರು ನನಗೆ ಯಾವಾಗಲೂ ಚೆಂದ,ಯಾಕೆಂದರೆ ಇದು ನಾನು ನನ್ನದೆಂಬ ಅಹಂಕಾರ ಬೆಳೆಸಿಕೊಂಡ ಗೂಡು,ಇಲ್ಲಿ ನಾನೇನು ಮಾಡಿದರು ಅದನ್ನು ಹೋಗಳಿ ಬೆನ್ನು ತಟ್ಟುವ ಜನರಿದ್ದಾರೆ ಸೋತರೆ ಕೈ ಹಿಡಿದು ನಡೆಸುವ ಕೈಗಳು ಇವೇ.ತಪ್ಪು ಮಾಡಿದಾಗ ಅದನ್ನು ತಿದ್ದಿಕೋ ಎಂದು ಹೇಳುವ ಮನಗಳೂ ಸಹ ಇವೇ . .

ಇಂಥಹ ಊರು ಎಲ್ಲೇ ಇದ್ದರೂ ಏನೇ ಆದರೂ ಒಂದು ಛಾಪೂ ಮಾಡಿ ಇಟ್ಟಿರುತ್ತದೆ.ಅದಕ್ಕೆ ಹಾಳುತ್ತಾರಲ್ಲಾ “ನಮ್ಮೂರು ನಮಗೆ ಚೇಂದ” ಅಂತ ಸುಮ್ಮನೆ ಅಲ್ಲ . ನೋಡು ನೋಡುತ್ತಿದ್ದಂತೆ ಮತ್ತೆ ಎರಡುದಿನಗಳು ಕಳದೇ ಹೋದವು ಮರಳಿ ಗೂಡಿಗೆ ಹೊರಡುವ ಸಮಯ.

ಮುಸ್ಸಂಜೆ ಹೊತ್ತಿಗೆ ಬಿಡಬಾರದು ಊರನ್ನು.ಇಡೀ ಊರೇ ಆಗ,ನಿಮ್ಮನ್ನು ಮರೆತುಹೋದ ಪ್ರೇಮಿಯ ಹಾಗೆ ಕಾಣುತ್ತದೆ.ಸರಭದಲ್ಲಿ ಹಿಂದೆ ಮುಂದೆ ಒಡಾಡುತ್ತ ತನ್ನ ವ್ಯವಹಾರವನ್ನು ಮುಂದುವರೆಸುತ್ತಿರುವ ಊರು ನನ್ನೊಬ್ಬನನ್ನು ಬಿಟ್ಟು ಮಿಕ್ಕೆಲ್ಲವರನ್ನು ಸಿಹಿಯಾಗಿ ಮಾತಾಡಿಸುತ್ತಿರುವ ದಾಯಾದಿಯಂತೆ ತೊರುತ್ತದೆ.ಒಂದಿನವೂ ಸುಳಿವು ಕೋಡದೆ ಹಠಾತ್ತನೆ  ಬಿಸಿನೆಸ್ ಆರಂಭಿಸಿ ಬಿಟ್ಟ ಹಳೆಯ ಗೆಳೆಯನಂತೆ ತೋರುತ್ತದೆ-ಇದೇ ಊರು.ಅದಕ್ಕೆ ಮುಸ್ಸಂಜೇಯಲ್ಲಿ ಬಿಡಬಾರದು ಊರನ್ನು.

ಬದುಕಲು ಬೇಕಾದ ಇನ್ನೊಂದಿಷ್ಟು ನವಿರವಾದ ಭಾವನೆಗಳನ್ನು ಹೊತ್ತು ಮತ್ತದೆ ಊಳೀಗದ ವ್ಯವಹಾರಕ್ಕೆ ಮರಳಿ ಬಂದೆ.ಮತ್ತದೇ ಬೇಸರ ಅದೇ ಸಂಜೇ ಅದೇ ಏಕಾಂತ . . .!!

Leave a Comment

Your email address will not be published. Required fields are marked *

Scroll to Top