ನಿನ್ನೆ ಮಧ್ಯಾನ್ಹ ತುಂಬಾನೆ ಬೋರ ಆಗಿ ಸುಮ್ಮನೆ ಓರ್ಕುಟ್ , ಫೇಸ್ ಬುಕ್ ಮತ್ತು ಟ್ವಿಟರ್ ನಲ್ಲಿ ತುಂಬಾ ದಿನವಾದ ಮೇಲೆ ನನ್ನೂರಿನ ಸುತ್ತು ಕಣ್ಣು ಹಾಕ್ತಾ ಇದ್ದೆ.ನಮ್ಮ ಹಳೆಯ ಸ್ನೇಹಿತರು,ಟಿಚರ್ಸಗಳು … ಸಿಕ್ಕ ಹಾಗೇ ಹಳೆಯ ನೆನಪುಗಳು ಬಿಚ್ಚಿಕೊಂಡವು. ಓರ್ಕುಟ್ ನ ಒಂದು ಸೈಟ್ನಲ್ಲಿ ಜೇ.ಎ.ಹೈ ಸ್ಕೂಲ್ ನ ಕಮ್ಯುನಿಟಿ ಲಿಂಕ್ ಸಿಕ್ತು. ಅದ್ರಲ್ಲಿ ಯಾರೋ” ನಿಮ್ಮ ಫೇವರಿಟ್ ಟೀಚರ್ ಯಾರು ” ಅಂತ ಪ್ರಶ್ನೆ ಕೇಳಿದ್ದ್ರು. ಎಮ್.ಎನ್.ಎಮ್.ಡಿ ಸರ್, ಗುಡಿ ಸರ್, ಕುಲಕರ್ಣಿ ಟೀಚರ್,ಏಮ್,ಜಿ,ಜೋಷಿ ಸರ್ … ಹೀಗೇ ಹಲವು ಹೆಸರುಗಳು ಕಂಡವು.ಆ Fev ಅನ್ನೊ ಶಬ್ಧದ ಹಿಂದಿನ ಗೌರವ,ಪ್ರೀತಿ ಇನ್ನು ಆ ಶಾಲೆಯ ವಿದ್ಯಾರ್ಥಿಗಳ ಮನಗಳಲ್ಲಿ ಹಚ್ಚ ಹಸುರಾಗಿದ್ದನ್ನು ಕಂಡು ಮನಸ್ಸಿಗೆ ಖುಶಿ ಎನಿಸಿತು.
ನಾನು ಶಾಲೆ ಕಲಿತದ್ದು ಅಥಣಿಯ ಜೇ.ಏ.ಹೈಸ್ಕೂಲ್ ಕನ್ನಡ ಶಾಲೆಯಲ್ಲಿ. ಹಾಗೇ ಕೂತು, ನನ್ನ ಹಳೆಯ ಟೀಚರ್ಸ್ ಗಳ ನೆನಪು ಮಾಡ್ದೆ. ನಾವು ಚಿಕ್ಕವರಿರುವಾಗ, ಟೀಚರ್ ಗಳ ಹೆಸರು ನಮಗೆ ಗೊತ್ತೇ ಇರಲಿಲ್ಲ. ಒಂದನೇ ಕ್ಲಾಸ್ ಟೀಚರ್(ಗೋಠೆ ಟೀಚರ್) , ಎರಡನೇ ಕ್ಲಾಸ್ ಟೀಚರ್(ಸುನಿತಾ ಟೀಚರ್) , ಮೂರನೇ ಕ್ಲಾಸ್ ಟೀಚರ್(ಸೋಲ್ಲಾಪೂರ್ ಸರ್) , ನಾಲ್ಕನೇ ಕ್ಲಾಸ್ ಟೀಚರ್(ಜಾಹಾಗೀರ್ ದಾರ್ ಟೀಚರ್) …. ಹೀಗೆ. ಯಾವಾಗ ಟೀಚರ್ ಗಳ ಹೆಸರು ನನಗೆ ಗೊತ್ತಾಯ್ತು ಅಂತ ನೆನಪಾಗ್ತಾ ಇಲ್ಲ. ಅವರ ಹೆಸರು ಗಳೊಂದಿಗೆ ಅವರ ಮುಖಗಳು ತಳಕು ಹಾಕುವುದೇ ಇಲ್ಲ. ಒಂದನೇ ಕ್ಲಾಸ್ ಟೀಚರ್ ಅಂತ ಹೇಳಿದ ಕೂಡಲೇ, ಟೀಚರ್ ನೆನಪಾಗ್ತಾರೆ. ಶಾಲೆಯ ದಿನಗಳೆಲ್ಲ ಕಣ್ಮುಂದೆ ಓಡಾಡ್ತವೆ.
ನಾನು ಒಂದನೆ ಕ್ಲಾಸ್ ನಲ್ಲಿ ದ್ದಾಗ ಎನೋ, ನಕ್ಷತ್ರ, ಮೋಡ, ಆಕಾಶದ ಡ್ರೆಸ್ ನಲ್ಲಿ ಡಾನ್ಸ್ ಮಾಡಿದ್ದು ನೆನಪು. ಸ್ಕೂಲ್ ಡೇ ಗೆ. ನಂಗೆ ಸ್ಕೂಲ್ ಡೇಗಳು ಮಾತ್ರ ನೆನಪಲ್ಲಿ ಇರುತಿತ್ತು. ಯಾಕಂದ್ರೆ, ಪ್ರತಿ ವರ್ಷ ನಾನು ಯಾವುದಾದ್ರೂ ಡಾನ್ಸ್ ನಲ್ಲಿ ಇರ್ತಾ ಇದ್ದೆ(Backgroud ನಲ್ಲಿ). ನಮ್ಮ ಟೀಚರ್ಸೇ ಡಾನ್ಸ್ ಹೇಳಿಕೊಡ್ತಾ ಇದ್ರು. ನಾನು ನಾಟಕದಲ್ಲಿ ಪಾರ್ಟ್ ಮಾಡಿದ್ದೇ ಇಲ್ಲ. ಆಮೇಲೆ ಐದನೇ ಕ್ಲಾಸ್ ಗೆ ಬಂದಮೇಲೆ ಐದು , ಆರನೇ , ಏಳನೇ ಕ್ಲಾಸ್ , ಹೈಸ್ಕೂಲ್ ಜತೆಗೇ ಇತ್ತು. ಅಲ್ಲಿ ಮೋದಲ ಬಾರಿ ನಮ್ಮ ಗುಡೀ ಸರ್ ಸಹಾಯದಿಂದ ನಾವು ಮೋದಲಬಾರಿಗೆ ಸಂಸ್ಕೃತ ನಾಟಕ ಮಾಡಿದ್ದೇವು.
ಮನೆಯಿಂದ ಟಿಫಿನ್ ಕ್ಯಾರಿಯರ್ ತೊಗೊಂಡು ಹೋಗ್ತಾ ಇದ್ವಿ . ಶಾಲೆಯ ಆವರಣದಲ್ಲಿ ನಮ್ಮ್ ಹುಣಸೆ ಮರ ಇತ್ತು ಅದರ ಬುಡದಲ್ಲೇ ನಮ್ಮ ಊಟ ಅಬ್ಬಬ್ಬಾ… ಅದೆಷ್ಟು ಕಾಗೆಗಳು ಬರ್ತಿದ್ವು. ನಮ್ಮ ಜತೆ ಊಟಕ್ಕೆ. ಊಟ ಮಾಡಿದ ನಂತರ ಅದೇ ನಮ್ಮ ಆಟದ ಮೈದಾನವಾಗೀಯೂ Convert ಆಗಿಬಿಡುತ್ತಿತ್ತು . ಎಲ್ಲ ಗೆಳೆಯರು ಸೇರಿ ಆಟ ಆಡೊದ್ರಲ್ಲಿ , ಊಟ ಮಾಡೊದ್ರಲ್ಲಿ ಇರುವ ಮಜಾ ಇನ್ನೆಲ್ಲಿದೆ . ಇಂಥಹ ನೂರಾರು ನೆನಪುಗಳನ್ನು ನಮಗಾಗಿ ಕಟ್ಟಿಕೊಟ್ಟ ನನ್ನ ಶಾಲೆಯ ಬಗ್ಗೆ ಎಷ್ಟು ಹೇಳಿದರೂ ಕದಿಮೇಯೆ. ಯಾವಾಗಲೂ ಹುಮ್ಮಸ್ಸಿನ್ನಿಂದ ಶಾಲೆಗೆ ತೆರಳುತ್ತಿದ್ದ ನಾವುಗಳು ಒಮ್ಮೊಮ್ಮೆ ಮುನಿಸು ಬಂದಾಗ ಅಮ್ಮ ಬೈದು – ಒಂದೆರಡು ಏಟು ಕೊಟ್ಟು ನಮ್ಮನ್ನು ಶಾಲೆಯ ತನಕ ಬಿಡಲು ಬರುತ್ತಿದ್ದ ದಿನಗಳು,ಗುರುವಾರ ಬಂತೆಂದರೆ ಬಣ್ಣ ಬಣ್ಣದ ಡ್ರೇಸ್ ಗಳನ್ನು ತೊಟ್ಟು ಶಾಲೆಗೆ ಆವರಣದಲ್ಲಿ ಆಡುವ ಖುಷಿ.ಅದೇ ಲಡ್ಡು – ಲಡ್ಡು ತಿಮ್ಮಯ್ಯನ ,ಅದೇ ಕೇರೆಯಲ್ಲಿ – ದಡದಲ್ಲಿ , ಅದೇ ಎರಡು ಹೇರಳುಗಳ ಗೇಳತಿಯರು, ಅದೇ ಶನಿವಾರದ ಡ್ರೀಲ್ .
ಇನ್ನು ಮಳೆಗಾಲದ ದಿನಗಳನ್ನು ನೆನೆಯುವುದರಲ್ಲೆ ಸುಖ ಧಾರಾಕಾರ ಸುರಿಯುವ ಮುಂಗಾರು ಮಳೆ, ಶಾಲೆ ಶುರು ಆಯ್ತು ಅಂದ್ರೆ , ಮಳೇನೂ ಶುರು ಅಲ್ವಾ. ಜೂನ್ ತಿಂಗಳೇ. .ಹೊಸ ಹೊಸ ಯುನಿಫಾರ್ಮಗಳು , ಹೊಸ ಹೊಸ ಟೆಕ್ಸ್ಟ್ ಪುಸ್ತಕ , ಹೊಸ ಹೊಸ ನೋಟ್ಸ್ ಬುಕ್ಸ್. ಅವಕ್ಕೆ ಒಂದು ವಾರದ ಹಿಂದಿನಿಂದ ಬೈಂಡ್ ಹಾಕಿ , ಲೇಬಲ್ ಅಂಟಿಸುವ ಸಂಭ್ರಮ. ಆ ಹೊಸ ಪುಸ್ತಕಗಳ ಪುಟಗಳ ನಡುವಿಂದ ಬರ್ತಿದ್ದ ಪರಿಮಳ … ಈಗಲೂ ನೆನಪಿದೆ. ಜತೆಗೆ ಹೊಸ ಸ್ಕೂಲ್ ಬ್ಯಾಗ್, ಹೊಸ ರೈನ್ ಕೋಟ್. ನಾನು ಏಳನೇ ಕ್ಲಾಸಿಗೆ ಬಂದ ಮೇಲೇ ನಂಗೆ ಕೊಡೆ ಸಿಕ್ಕಿದ್ದು ಅಲ್ಲಿಯ ತನಕ ರೈನ್ ಕೋಟೆ ನನಗೆ ಮಳೆಯ ದಿನಗಳ ಗೆಳೆಯ . ರೈನ್ ಕೋಟ್ ಹಾಕ್ಕೊಂಡು ಎಲ್ಲ ವಿದ್ಯಾರ್ಥಿಗಳು ಶಾಲೆಯ ಆವರಣಕ್ಕೆ Entry ಕೊಡುತ್ತಿದ್ದ ಕಾಲವನ್ನು ನೋಡುವುದೆ ಒಂದು ಸುಂದರ ಸಮಯ , ವಿಧ ವಿಧವಾದ ಚಿಟ್ಟೆಗಳು ಹಾರಾಡಿಕೊಂಡು ಗೂಡಿಗೆ ಬರುತ್ತಿರುವಹಾಗೆ ದೋಚಿಸುತ್ತಿತ್ತು ಕಣ್ಣಿಗೆ ಆಲ್ಹಾದದ ಸಮಯ ಸೂಚಿಸುವ ಕಾಲಗಳು ಅವು.
ನಾನು , ಕಲಿತದ್ದು ಕನ್ನಡ ಮೀಡಿಯಂ ನಲ್ಲಿ. ನಮ್ಮ ಅಪ್ಪ ಅಮ್ಮನನ್ನ ಎಲ್ರೂ ಕೇಳ್ತಿದ್ರು. ” ಯಾಕೆ, ಕನ್ನಡ ಮೀಡಿಯಂಗೆ ಹಾಕಿದ್ದೀರಿ ” ಅಂತ. ಆಗೆಲ್ಲಾ ..ಎಲ್ರಿಗೂ ಮಕ್ಕಳನ್ನ ಇಂಗ್ಲಿಷ್ ಮೀಡಿಯಂಗೆ ಸೇರಿಸೋ ಹುಚ್ಚು. ಇಂಗ್ಲಿಷ್ ಮೀಡಿಯಂನಲ್ಲಿ ಕಲಿತರೆ ಮಕ್ಕಳು ಬುದ್ಧಿವಂತರಾಗ್ತಾರೆ. ಒಳ್ಳೇ ಕೆಲಸ ಸಿಗುತ್ತೆ. ಅಂತ ಏನೋ . ಡೊನೇಶನ್ ಕೊಟ್ಟು ಯಾಕೆ ಮಕ್ಕಳನ್ನು ಓದಿಸ್ಬೇಕು. ಮಕ್ಕಳು ಬುದ್ಧಿವಂತರಾಗಿದ್ರೆ(ಆದ್ರೆ ಈ ಒಂದು ವಿಷಯದಲ್ಲಿ ನಮ್ ಅಪ್ಪಾ ಬೆಪ್ಪರಾದರು 🙂 ) ಯಾವ ಶಾಲೆ ಆದ್ರೆ ಏನಂತೆ . ಕಲ್ತೇ ಕಲೀತಾರೆ . ಮಕ್ಕಳ ಪ್ರಾಥಮಿಕ ಹಂತದ ಶಿಕ್ಷಣ ಮಾತೃಭಾಷೆಯಲ್ಲೇ ಆಗಬೇಕು ಅನ್ನುವ ಪ್ರತಿಪಾದನೆ ಅವರದ್ದು. ಮೊದ ಮೊದಲು ಎಲ್ರೂ ಯಾಕೆ ಹಾಗೆ ಕೇಳ್ತಾ ಇದ್ರು ಅಂತ ಗೊತ್ತಿರ್ಲಿಲ್ಲ. ಆಮೇಲೆ … ಕೆಲವೊಮ್ಮೆ ಇಂಗ್ಲಿಷ್ ಮೀಡಿಯಂ ಶಾಲೆಯ ಮಕ್ಕಳನ್ನು ನೋಡ್ತಿದ್ದಾಗ … ಅನ್ನಿಸ್ತಿತ್ತು. ಓಳ್ಳೆ ಒಳ್ಳೆಯ ಕುರ್ಚಿ ಬೆಂಚುಗಳು… ಆಟದ ವಸ್ತುಗಳು… ಟಿ ವಿ … ಪುಸ್ತಕದ ಲೈಬ್ರರಿ … ನಾವು ಅವರ ಥರ ಯಾಕಿಲ್ಲ ಅಂತ ಅನ್ನಿಸೋದು . ಆದ್ರೆ ಕನ್ನಡ ಮೀಡಿಯಂ ನಲ್ಲಿ ಇದ್ಕೋಂಡು ಕಳೆದ ಬಾಲ್ಯದ ದಿನಗಳು ನಿಜವಾಗ್ಲೂ ಸುಖಮಯವಾಗಿದ್ದವು ಅದು ಅರ್ಥವಾಗಿದ್ದು ತುಂಬಾ ನಂತರದ ದಿನಗಳಲ್ಲಿ. ಕನ್ನಡಾ ಮೀಡಿಯಂನಲ್ಲಿದ್ದುಕೊಂಡೆ ನಮ್ಮಲ್ಲಿ ಎಷ್ಟೊ ಜನ ಸಾಧನೆ ಮಾಡಿದ್ರು ಏಗ್ಲೂ ಮಾಡ್ತಿದ್ದಾರೆ Infact ಇಂಗ್ಲಿಷ ಮಿಡಿಯಂ ನಲ್ಲಿ ಕಲಿತ ವಿದ್ಯಾರ್ಥಿಗಳಿಗಿಂತ ಚೆನ್ನಾಗಿ ಇಂಗ್ಲಿಷ ಮಾತಾಡ್ತಾರೆ. ಆಗಿನ ಕಾಲದಲ್ಲಿ ಅದೇನೋ ಒಂಥರಹದ ಮಾತಿತ್ತು ಇಂಗ್ಲಿಷ ಶಾಲೆಗಳಲ್ಲಿ ಕಲಿತರೆ ಮಕ್ಕಳು ಒಳ್ಳೆಯ ಜೀವನ ಮಾಡಲು ಸಾಧ್ಯ ಅಂತ ಆದರೆ ಅದೆಲ್ಲಾ ಬರೀ ಮಾತಿಗಷ್ಟೆ ಸೀಮಿತವಾಗಿರುತ್ತಿದ್ದ ಮಾತುಗಳು.
ಹೀಗೆ ದಿನಗಳು ಉರುಳ್ತಾ ಹೋದ ಹಾಗೆ , ಕಾಲದ ಪರಿಧಿಯಲ್ಲಿ ಬೆರಿತಾ ಹೋದ ಹಾಗೆ ನಾವು ಯಾವ ಹಳೆಯ ಕಾಲದಲ್ಲಿದ್ವಿ ಅಂತ ಅನ್ನಿಸತ್ತೆ ಅಲ್ವಾ.
ಈಗ ನಾನು 24 ಗಂಟೆ ಇಂಟರ್ ನೆಟ್ ಎದುರು ಕೂತ್ಕೊಂಡು ಪ್ರಪಂಚ ಸುತ್ತಿ ಬರ್ತೀನಲ್ಲ.ನಾನೇ ಏಕೆ. ಸಣ್ಣ ಸಣ್ಣ ಮಕ್ಕಳೂ ಗೂಗಲ್ ಅರ್ಥ್ ನಲ್ಲಿ … ಹೇ ಇದು ಅಮೇರಿಕಾ .. ಇದು ಯುರೋಪ್.. ಇದು ಐ ಲಾಂಡ್ಸ್ … ಅಂತ ಸುತ್ತಿ ಬಂದು ಉಸ್ಸಪ್ಪಾ …ಅಂತ ಅಂದಾಗ ಭೂಮಿ ಇಷ್ಟೇ ಚಿಕ್ಕದಾ ಅಂತ ಉದ್ಗಾರ ಹೊರಡಿಸ್ತಾರೆ..!!ಇಲ್ಲಿಗೆ ಬಂದು ನಿಂತಿದೆ ನಮ್ಮ ಕಾಲದ ಜೋತೆಗಿನ ಸರಸ. ಈ ಇಪ್ಪತ್ನಾಲ್ಕು ವರ್ಷಗಳೇ ನಂಗೆ ಇಷ್ಟೊಂದು ಬದಲಾವಣೆಯನ್ನ ನೀಡಿದೆ ಅಂದ್ರೆ … ನನ್ನ ಅಪ್ಪ-ಅಮ್ಮನ ಜನರೇಶನ್ , ಅಜ್ಜ-ಅಜ್ಜಿಯ ಜನರೇಶನ್ ಎಷ್ಟು ರೀತಿಯ ಚೇಂಜಸ್ , ಬದಲಾವಣೆ ಗಳಿಗೆ ಮುಖಾಮುಖಿ ಯಾಗ್ಬೇಕಾಯ್ತು. ಅಲ್ವಾ?
ಬರಿ ಸಾಮಾಜಿಕ ಸ್ತರಗಳಲ್ಲಿ ಅಷ್ಟೇ ಅಲ್ಲ. ನಮ್ಮ ಬದುಕಿನ ರೀತಿ, ನಡುವಳಿಕೆ, ನಂಬಿಕೆಗಳು,ಆದರ್ಶ,ಐಡಿಯೋಲಜಿಗಳು… ಎಲ್ಲಾ… ಬದಲಾಗಿವೆ. ನನ್ನ ಶಾಲೆ ಕೂಡ ಬದಲಾಗಿದೆ. ಈಗ ನಂಗೆ ಕಲಿಸಿದ ಟೀಚರ್ಸ್ ಗಳು ಅಲ್ಲಿ ಇಲ್ಲ . ಕೆಲವರು ರಿಟೈರ್ಡ್ ಆಗಿದ್ದಾರೆ. ಮತ್ತೆ ಕೆಲವರು ಬೇರೆ ಶಾಲೆಗೆ ವರ್ಗವಾಗಿದ್ದಾರೆ. ಹೊಸ ಕುರ್ಚಿ ಬೆಂಚು ಗಳು ಬಂದಿವೆ. ಸ್ಟಾಫ್ ರೂಂ ದೊಡ್ಡದಾಗಿದೆ. ಲೈಬ್ರರಿ , ಸಾಯನ್ಸ್ ಲಾಬ್ ಗಳು ಬಂದಿವೆ.ಬಂದ ಟಿಚರ್ಸ ಕಲಿಸುವ ರೀತಿ ಬದಲಾಗಿವೆ ,ವಿದ್ಯಾರ್ಥಿಗಳ Thinking capability chagne ಆಗಿವೆ ಹೀಗೆ ಜೀವನದ ಪ್ರತಿ ಮಜಲುಗಳ ಮೇಲೆ ಬದಲಾವಣೆಯ ನೆರಳುಗಳು ಕಂಡಿದೆ. Change is Constant ಆದ್ರೆ … ಆಗಿದ್ದ ಮುಗ್ಧತೆ… ಆರ್ದ್ರತೆ … ಅಪ್ಯಾಯವಾದ ಒಂದು ಫೀಲಿಂಗ್ ಈಗ ಇಲ್ಲ. ಇದು ವಿಷಾದ ಅಲ್ಲ.. ಆದ್ರೆ ಅನಿವಾರ್ಯವಾದ ನೋವಿನ ಒಂದು ಎಳೆ ನಮ್ಮನ್ನಾ ಸದಾ ಕಾಡುತ್ತಿದೆ ಈ ನೋವಿಗೆ CHANGE ಬೇಕಾಗಿದೆ ಅಷ್ಟೆ.


