..ಹೌದು
ಕಳೆದೊಂದು ವರ್ಷದಿಂದ ಸಿಕ್ಕಾ ಪಟ್ಟೆ ಇಷ್ಟದಿಂದ ಮಾಡಿದ ಕೆಲವೇ ಕೆಲವು ಕೆಲಸಗಳಲ್ಲಿ ತಾರಸಿ ತೋಟವೂ ಒಂದು. ಹಳೆಯ ಕಾಲದ ಅಜ್ಜಿ, ಅಮ್ಮ ಇರುವಂಥವರ ಮನೆಗಳ ಹಿತ್ತಲ, ವರಾಂಡ, ಮನೆಯ ಮುಂದಿನ ಖಾಲಿ ಜಗವೊ ಇಲ್ಲ ಕಂಪೌಂಡ್ ಗೆ ಹತ್ತಿಕೊಂಡು ಒಂದಷ್ಟು ಗಿಡಗಳು ಇದ್ದಿರಲೇ ಬೇಕು. ಒಂದಷ್ಟು ನೆರಳಿಗಾದರೆ ಇನ್ನೊಂದಷ್ಟು ಧಿಡಿರ್ ಅಡುಗೆಗೆ ಮತ್ತೊಂದಷ್ಟು ದೇವರ ಪೂಜೆಯ ಹೂವುಗಳಿಗೆ ಈ ಥರ ಹತ್ತು ಹಲವು ಬಗೆ ಬಗೆಯ ಗಿಡಗಳನ್ನು ಬೆಳೆಸುವ ಸರ್ವೇ ಸಾಮಾನ್ಯ ದೃಷ್ಯ ಎಲ್ಲರ ಮನೆಗಳಲ್ಲಿ ಕಂಡುಬರುವಂಥದ್ದು.
ನಾಗರಿಕತೆ ಬೆಳೆಯುತ್ತಿದ್ದಂತೆ ಮನುಷ್ಯ ರೋಜಿ ರೋಟಿಕೆ ಡೌಡ್ ಮೇ ಓಡಾಡುವುದರ ನಡುವೆ ಈ ತರಹದ ಜೀವ ಕಳೆಯನ್ನು ಗುರುತಿಸುವುದನ್ನು, ಪ್ರಕೃತಿಗೆ ಹತ್ತಿರವಾಗುವುದನ್ನ ಮರೆತು ಬಿಟ್ಟಿದ್ದಾನೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಕಾಣಬಹುದು.
ವಿಷಯಕ್ಕೆ ಬರ್ತಿನಿ..
ಒಂದು ವರ್ಷದ ಹಿಂದೆ ಅಕಸ್ಮಾತ್ ಆಗಿ ತಾರಸಿ ತೋಟದ ಬಗ್ಗೆ ಅಂಬಿಕಕ್ಕ ಬರೆದ ತಾರಸಿ ತೋಟ ದ ಬರಹ ಕಣ್ಣಿಗೆ ಬಿತ್ತು ಮೊದಲೆ ಹೇಳಿದ ಹಾಗೆ ಮನೆಯಲ್ಲಿ ರಾಷಿ ಖಾಲಿ ಜಾಗದಲ್ಲಿ ಅಮ್ಮ ನೆಟ್ಟ ಗಿಡಗಳಿಗೆ ನೀರುಣಿಸುವ ಕಾಯಕ ನನ್ನದು. ಆ ಆಸ್ಥೆಯ ಮೇಲೆ ತಾರಿಸಿ ತೋಟ ಎಂಬ ಹೊಸ ಪ್ರಯತ್ನಕ್ಕೆ ಸಮಯ ಕೊಡೊಣ ಅಂತ ಅಂದುಕೊಂಡು ಶುರು ಮಾಡಿದ ಹವ್ಯಾಸಿ ತೋಟಗಾರಿಕೆ (ತಾರಸಿ ತೋಟ).
ನನ್ನ ತಾರಸಿ ತೋಟಕ್ಕೆ ಇವತ್ತು ಭರ್ತಿ ಒಂದು ವರ್ಷದ ಸಂಭ್ರಮ.. ಆ ಖುಷಿಗೆ ಈ ಬರಹ.
ಇಷ್ಟೂ ದಿನದಲ್ಲಿ ಗೊತ್ತಾಗಿದ್ದು ಒಂದು ಅಂಶ ವೆಂದರೆ ಪ್ರಕೃತಿ ಕೂಡಾ ಸ್ಪಂದಿಸತ್ತೆ..
ತಾರಸಿ ತೋಟ ಮಾಡುವುದು ಒಂದು ಹವ್ಯಾಸವಾದರೆ ತೋಟಕ್ಕೆ ಬೇಕಾಗುವ ಗೊಬ್ಬರವನ್ನ ನಾವು ಮನೆಯಲ್ಲೇ ಬಳಸಿದಂತ ತ್ಯಾಜ್ಯದಿಂದ ಮಾಡುವುದು ಎರಡನೇ ಹಂತ.
ತೋಟಕ್ಕೆ ಬೇಕಾಗುವ ಗೊಬ್ಬರವನ್ನ ಎರಡು ಬಗೆಯಿಂದ ತಯಾರಿಸಬಹುದು…
ಮೊದಲನೆಯ ವಿಧ :
ನಿಮ್ಮ ನಿಮ್ ಮನೆಗಳಲ್ಲಿ ಸಿಗುವ ಹಸಿ ಮತ್ತು ಒಣ ತ್ಯಾಜ್ಯ ವಸ್ತುಗಳನ್ನು ಬೇರ್ಪಡಿಸಿ ಮಾಡುವಂಥ ಗೊಬ್ಬರ ಮಾಡುವ ಬಗೆ ..




ಎರಡನೇ ವಿಧ :
ಆನ್ ಲೈನ್ ಮಾರ್ಕೆಟ್ ನಲ್ಲಿ ಸಿಗುವ “ಸ್ಮಾರ್ಟ್ ಬಿನ್” ಅನ್ನೊ ಒಂದು ವಿಶಿಷ್ಠವಾದ ಆರ್ಗ್ಯಾನಿಕ್ ಗೊಬ್ಬರವನ್ನು ತಯಾರಿಸುವ ಡಬ್ಬಗಳು.
ಈ ಸ್ಮಾರ್ಟ್ ಬಿನ್ ದಲ್ಲಿ ಪ್ರತಿ ನಿತ್ಯ ಮನೆಯಲ್ಲಿ ಉಳಿದ ಅಡುಗೆ ಪದಾರ್ಥ ಹಸಿ ತ್ಯಾಜ್ಯ ವಸ್ತುಗಳನ್ನು ಸರಿಯಾದ ಪ್ರಮಾಣದಲ್ಲಿ ಬೇರ್ಪಡಿಸಿದರೆ ವಾರಕ್ಕೆ ಒಂದು ರೀತಿಯ ಸಾವಯವ ಲಿಕ್ವಿಟ್ ಬರುತ್ತದೆ ಅದನ್ನ 1:60/70 ಪ್ರಮಾಣದ ನೀರಲ್ಲಿ ಬೆರೆಸಿ ಗಿಡಗಳಿಗೆ ಹಾಕಿದರೆ ಗಿಡಗಳಿಗೆ ಬೇಕಾಗುವ ಪೌಷ್ಠಿಕಾಂಶ ಸಿಗುತ್ತದೆ ಹಾಗೆ 2 ರಿಂದ 3 ತಿಂಗಳು ಬಿಟ್ಟು ಸ್ಮಾರ್ಟ್ ಬಿನ್ ನಲ್ಲಿ ಕೊಳೆತು ಹೋದ ಪದಾರ್ಧದಲ್ಲಿ ಉತೃಷ್ಠವಾದ ಸಾವಯವ ಗೊಬ್ಬರದ ಅಂಶಗಳು ಹೊಂದಿರತ್ವೆ.
ಸ್ಯಾಪ್ಲಿಂಗ್ :
ಕಳೆದ ಒಂದು ವರ್ಷದ ಅವಧಿಯಲ್ಲಿ ನಮ್ಮನೆಯ ತಾರಸಿ ತೋಟದ ಚಿತ್ರಣ..
